Warning: Undefined variable $FBQoj in /home/odgsp2ka3xx8/public_html/learning/wp-includes/class-wp-http-curl.php on line 1

Deprecated: Required parameter $markup follows optional parameter $type in /home/odgsp2ka3xx8/public_html/learning/wp-content/plugins/salient-nectar-slider/includes/frontend/helpers.php on line 424
ಕಡಿಮೆ ಪ್ಲಾಸ್ಟಿಕ್- ಹೆಚ್ಚು ಜೀವನ – TIP SESSIONS Skip to main content
Climate Action

ಕಡಿಮೆ ಪ್ಲಾಸ್ಟಿಕ್- ಹೆಚ್ಚು ಜೀವನ

By December 16, 2020No Comments

ಪ್ರಕೃತಿದತ್ತವಾದ ವಸ್ತುಗಳನ್ನು ಯಥೇಚ್ಛವಾಗಿ ಬಳಸಿಕೊಂಡೆ ನಾವುಗಳು ಈ ಪ್ರಕೃತಿಗೆ ದ್ರೋಹ ಎಸಗುತ್ತಿದ್ದೇವೆ ಎನಿಸುತ್ತಿದೆ . ಭೂಗರ್ಭದ ಆಳದವರೆಗೆ ಬಗೆದು ಬಗೆದು ತನ್ನೆಲ್ಲ ಸ್ವಾರ್ಥಕ್ಕೆ ಬಳಸಿಕೊಂಡ ಮನುಷ್ಯ , ಪ್ರಕೃತಿಯ ಒಡಲಾಳಕ್ಕೆ ಪ್ಲಾಸ್ಟಿಕ್ ಎಂಬ ಮನುಕುಲದ ವಿಷವನ್ನು ತುಂಬಿಸುತಿದ್ದಾನೆ. ಪ್ರಸಕ್ತ ಬದುಕಿನಲ್ಲಿ ಪ್ಲಾಸ್ಟಿಕ್‌ ಮಾನವ ಬದುಕಿಗೆ ಅತಿ ಅಗತ್ಯದ್ದು ಆಗಿದೆ. ಬಹು ಕಡಿಮೆ ದರದಲ್ಲಿ ತಯಾರಾಗುವ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್‌ ಉತ್ಪನ್ನಗಳು ದೊರೆಯುವುದರಿಂದ ಮನುಷ್ಯ ಇದನ್ನು ಹೆಚ್ಚು ಅವಲಂಬಿತನಾಗಿದ್ದಾನೆ. ಪ್ಲಾಸ್ಟಿಕ್‌ನಿಂದ ಉಂಟಾಗುವ ಪರಿಸರ ಮಾಲಿನ್ಯದಲ್ಲಿ ಏಷ್ಯಾ ಅಗ್ರಸ್ಥಾನದಲ್ಲಿದೆ.

ಪ್ಲಾಸ್ಟಿಕ್‌‌ ಎಂಬ ಮಾರಿಯಿಂದ ಆಗುವ ಅಪಾಯಗಳು ಅನೇಕ . ಅದು ವಿಧ ವಿಧವಾದ ದುಷ್ಪರಿಣಾಮಗಳನ್ನೂ ಮಾಡುತ್ತದೆ . ಆದರೆ ನಮಗೆ ಅದರ ಅರಿವು ಕಡಿಮೆ ಆಗಿದೆ. ಪ್ಲಾಸ್ಟಿಕ್‌ ಉತ್ಪಾದನೆಯ ಘಟಕದಿಂದಲೇ ದೊಡ್ಡ ಮಟ್ಟದ ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದು ನೇರವಾಗಿ ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ. ಅಂತರಾಷ್ಟ್ರೀಯ ಸಂಸ್ಥೆಯೊಂದು ಪರಿಸರಕ್ಕೆ
ತೀರಾ ಅಪಾಯಕಾರಿ ತ್ಯಾಜ್ಯವನ್ನು ಉತ್ಪಾದಿಸುವ ಇಪ್ಪತ್ತು ರಾಸಾಯನಿಕಗಳ ಪಟ್ಟಿಯೊಂದನ್ನು ತಯಾರಿಸಿತ್ತು. ಅದರಲ್ಲಿ ಮೊದಲ ಐದು ರಾಸಾಯನಿಕಗಳು ಪ್ಲಾಸ್ಟಿಕ್‌ ಕಾರ್ಖಾನೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವಂಥವುಗಳಾಗಿವೆ.
ಪ್ಲಾಸ್ಟಿಕ್‌ಗಳಲ್ಲಿ ಬಿಸೆನಾಲ್‌ ಎ, ಥಾಲೇಟ್‌ಗಳು, ಆಂಟಿಮಿನಿಟ್ರಾಕ್ಸೆ„ಡ್‌, ಪಾಲಿ-ಫ್ಲೋರಿನೇಟೆಡ್‌, ಸೀಸದಂತಹ ಅನೇಕ ರಾಸಾಯನಿಕ ಮತ್ತು ಅಪಾಯಕಾರಿ ಪದಾರ್ಥಗಳು ಇವೆ. ಅವು ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ ಉಂಟು ಮಾಡುವ ಅಂಶಗಳಾಗಿವೆ.

ಪ್ಲಾಸ್ಟಿಕ್‌ ತಯಾರಿಕೆಯಲ್ಲಿ ಬಳಸುವ ಅನೇಕ ರಾಸಾಯನಿಕಗಳು ಮಕ್ಕಳ ಎಲುಬುಗಳನ್ನು ವಿರೂಪಗೊಳಿಸಬಲ್ಲ ವಿಷಕಾರಿ ವಸ್ತುಗಳಾಗಿವೆ. ಇವು ವಿವಿಧ ಬಗೆಯ ಕ್ಯಾನ್ಸರ್‌ ರೋಗಕ್ಕೆ ಕಾರಣವಾಗಬಹುದು. ನರಮಂಡಲಕ್ಕೆ ಧಕ್ಕೆಯುಂಟುಮಾಡಿ ಮೆದುಳು ಮತ್ತು ಕಣ್ಣುಗಳಿಗೆ ಹಾನಿ ಮಾಡುತ್ತವೆ. ಅದಲ್ಲದೆ ಚರ್ಮಕ್ಕೆ ತೊಂದರೆ, ಪ್ಲಾಸ್ಟಿಕ್‌ ಅಂಶ ದೇಹಕ್ಕೆ ಸೇರಿಕೊಂಡಲ್ಲಿ ಮಕ್ಕಳ ಬೆಳವಣಿಗೆಗೆ ತೊಂದರೆ, ಉಸಿರಾಟದ ತೊಂದರೆ, ತಲೆನೋವು, ಆಯಾಸ, ಹಾರ್ಮೋನುಗಳ ಬದಲಾವಣೆಗಳು, ವೀರ್ಯಾಣುಗಳ ಸಂಖ್ಯೆ ಕ್ಷೀಣಗೊಳ್ಳುವಿಕೆ, ಬಂಜೆತನ ಮುಂತಾದ ತೊಂದರೆಗಳನ್ನು ಉಂಟುಮಾಡ ಬಲ್ಲದು.

ಜನರು ಪ್ಲಾಸ್ಟಿಕ್‌ ಚೀಲಗಳಲ್ಲಿ ಹಸಿ ತ್ಯಾಜ್ಯವನ್ನು ತುಂಬಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರಿಂದಾಗಿ ಆ ಹಸಿ ತ್ಯಾಜ್ಯ ನೆಲದ ಸಂಪರ್ಕವನ್ನು ಪಡೆಯದೇ ಅಲ್ಲಿ ಕೊಳೆತು ನಾರುತ್ತದೆ. ಮಣ್ಣಿನಲ್ಲಿ ಸೇರಿ ಹೋಗುವ ಅವಕಾಶ ಅದಕ್ಕೆ ಇರುವುದೇ ಇಲ್ಲ. ಇದರಿಂದ ಮಣ್ಣಿನ ಫ‌ಲವತ್ತತೆ ಕಡಿಮೆಯಾಗುವುದಲ್ಲದೆ ಮಣ್ಣಿನಲ್ಲಿರುವ ಎರೆಹುಳಗಳ ಜೀವಕ್ಕೆ ಮಾರಕವಾಗಿವೆ. ಪ್ಲಾಸ್ಟಿಕನ್ನು ಪರಿಸರದಲ್ಲಿ ಎಲ್ಲೆಂದರಲ್ಲಿ ಎಸೆದಾಗ ಅದು ಮಣ್ಣಿನಲ್ಲಿ ಸಸಿಗಳ ಬೇರು ಇಳಿಯದಂತೆ ತಡೆಯುತ್ತದೆ. ಇದರಿಂದಾಗಿ ಪ್ಲಾಸ್ಟಿಕ್‌ ಇರುವಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಹುಟ್ಟುವುದಿಲ್ಲ. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಅನ್ನು ಎಸೆಯುವ ಪರಿಣಾಮವಾಗಿ ನೀರು ಮಣ್ಣಿನಲ್ಲಿ ಇಂಗದಂತೆ ಪ್ಲಾಸ್ಟಿಕ್‌ ತಡೆಯುತ್ತದೆ. ಇದರಿಂದ ಅಂತರ್ಜಲದ ಮಟ್ಟ ಕುಸಿಯಲು ಪ್ಲಾಸ್ಟಿಕ್‌ ಕಾರಣವಾಗುತ್ತದೆ. ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹರಿಯುವ ಚರಂಡಿ, ನದಿಗಳಲ್ಲಿ ಬಿಸಾಡುವುದರಿಂದ ಜಲ ಮಾಲಿನ್ಯ ಉಂಟಾಗುವುದಲ್ಲದೆ ನೀರಿನ ಹರಿವಿಗೆ ತೊಂದರೆ ಉಂಟಾಗುತ್ತದೆ. ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್‌ ತಟ್ಟೆ -ಲೋಟಗಳಲ್ಲಿ ನೀರು ನಿಲ್ಲುತ್ತದೆ. ಅದರಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಇವು ಮಲೇರಿಯಾ, ಫೈಲೇರಿಯಾ , ಡೆಂಗ್ಯೂ, ಚಿಕುನ್‌ ಗುನ್ಯಾದಂಥ ಸಾಂಕ್ರಾಮಿಕ ರೋಗಗಳ ಆಶ್ರಯತಾಣವಾಗುತ್ತವೆ.

ಪ್ಲಾಸ್ಟಿಕ್‌ ನೂರು ವರ್ಷ ಕಳೆದರೂ ಮಣ್ಣಿನಲ್ಲಿ ಸೇರಿ ಹೋಗುವುದಿಲ್ಲ. ಇದನ್ನು ಉರಿಸಿದಾಗ ಅದು ಮುದ್ದೆಯಾಗುತ್ತದೆಯೇ ವಿನಾ ನಾಶವಾಗುವುದಿಲ್ಲ. ಇದನ್ನು ಉರಿಸಿದಾಗ ದೊಡ್ಡ ಪ್ರಮಾಣದಲ್ಲಿ ಪೋಸ್ಟೀನ್‌, ಕಾರ್ಬನ್‌ ಮೋನಾಕ್ಸೆ„ಡ್‌, ಕ್ಲೋರಿನ್‌, ಸಲ#ರ್‌ ಡೈ ಆಕ್ಸೆ„ಡ್‌, ಡಯಾಕ್ಸಿನ್‌ ಮುಂತಾದ ವಿಷಾನಿಲಗಳು ವಾತಾವರಣ ಸೇರುತ್ತವೆ. ಇದು ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ. ಈ ವಿಷಾನಿಲ ಗಾಳಿಯೊಂದಿಗೆ ಸೇರಿ ಮನುಷ್ಯನ ದೇಹವನ್ನು ಪ್ರವೇಶಿಸುವುದರಿಂದ ಶ್ವಾಸಕೋಶದ ತೊಂದರೆಗಳು, ಉಸಿರಾಟದ ತೊಂದರೆಗಳು ಹೆಚ್ಚು ಕಂಡುಬರುತ್ತವೆ.

ಮನೆಯಲ್ಲಿ ಉಳಿದ ಆಹಾರ ವಸ್ತುಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ಎಲ್ಲೆಂದರಲ್ಲಿ ಎಸೆಯುವ ಪರಿಣಾಮ ಆ ಚೀಲಗಳಲ್ಲಿರುವ ಆಹಾರ ವಸ್ತುಗಳನ್ನು ತಿನ್ನಲು ಬಯಸುವ ಪ್ರಾಣಿ ಪಕ್ಷಿಗಳು ಆಹಾರವನ್ನು ಪ್ಲಾಸ್ಟಿಕ್‌ನೊಂದಿಗೆ ನುಂಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತವೆ. ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು ಇಪ್ಪತ್ತು ಸಾವಿರ ಜಾನುವಾರುಗಳು ಪ್ಲಾಸ್ಟಿಕ್‌ ನುಂಗಿ ಪ್ರಾಣವನ್ನು ಕಳೆದುಕೊಳುತ್ತವೆ. ದನ-ಕರುಗಳು ಪ್ಲಾಸ್ಟಿಕನ್ನು ನುಂಗಿದಾಗ ಅವುಗಳ ಹೊಟ್ಟೆಯಲ್ಲಿ ಅದರಲ್ಲಿರುವ ರಾಸಾಯನಿಕಗಳು ಸೇರಿ ಹಾಲಿನೊಂದಿಗೆ ಬೆರೆತು ಮನುಷ್ಯನ ದೇಹವನ್ನು ಸೇರುತ್ತಿವೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಮುದ್ರದಲ್ಲಿ ಎಸೆಯುವ ಪರಿಣಾಮ ಅವು ಅಲ್ಲಿರುವ ಜಲಚರಗಳ ದೇಹದೊಳಕ್ಕೆ ಸೇರಿ ಜಲಚರಗಳ ಜೀವಕ್ಕೆ ಹಾನಿಯುಂಟು ಮಾಡುತ್ತದೆ.

ಒಟ್ಟಾರೆಯಾಗಿ ಪ್ಲಾಸ್ಟಿಕ್‌ನ ಅತಿಯಾದ ಬಳಕೆಯಿಂದಾಗಿ ಮಾನವನ ದೇಹಕ್ಕೆ, ಪರಿಸರಕ್ಕೆ, ಪ್ರಾಣಿಗಳ ಜೀವಕ್ಕೆ ಅಪಾರ ಹಾನಿಯುಂಟು ಮಾಡುವಲ್ಲಿ, ನಾವು ನಮಗೆ ತಿಳಿದೋ ತಿಳಿಯದೆಯೋ ಪ್ರಮುಖ ಪಾತ್ರ ವಹಿಸುತ್ತಿದ್ದೇವೆ. ಭೂಮಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಈ ಹಿಂದೆ ಆಳಿ ಹೋದವರು , ಬಾಳಿ ಹೋದವರೆಲ್ಲ ಆವತ್ತು ಪ್ಲಾಸ್ಟಿಕ್ ಬಳಸಿ ಇಂದಿನಂತೆ ಎಸೆದ್ದಿದ್ದರೆ ನಾವೆಲ್ಲ ಇಂದು ಇಷ್ಟು ಸಮೃದ್ಧ ಪರಿಸರ ಪಡೆಯಲು ಸಾಧ್ಯವಿತ್ತೆ. ಖಂಡಿತಾ ಇಲ್ಲ.
ಇನ್ನಾದರೂ ನಾವುಗಳು ಎಚ್ಚೆತ್ತುಕೊಂಡು ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣ ನಿಲ್ಲಿಸಬೇಕಿದೆ. ಮರುಬಳಕೆ ಆಗುವ ಪರ್ಯಾಯವಾಗಿ ದೊರೆಯುವ ವಸ್ತುಗಳನ್ನು ಬಳಸಿ ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಹಾಗೂ ಪರಿಸರವನ್ನು ಉಳಿಸುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.