Warning: Undefined variable $FBQoj in /home/odgsp2ka3xx8/public_html/learning/wp-includes/class-wp-http-curl.php on line 1
ಸಮುದಾಯದ ಮೂಲಕ ಪರಿಸರ ವ್ಯವಸ್ಥೆಯ ಪುನರ್ ನಿರ್ಮಾಣ – TIP SESSIONS Skip to main content

ಪ್ರತಿ ಮೂರು ಸೆಕೆಂಡಿಗೆ ನಮ್ಮೀ ಜಗತ್ತು ಒಂದು ಫುಟ್ಬಾಲ್ ಕ್ರೀಡಾಂಗಣ ತುಂಬುವಷ್ಟು  ವ್ಯಾಪ್ತಿಯಲ್ಲಿರಬಹುದಾಗುವಷ್ಟು ಮರಗಳನ್ನು ಕಳೆದುಕೊಳ್ಳುತ್ತಿದೆ. ಮರಗಳು ಉಸಿರು ನೀಡುವ ಆಕ್ಸಿಜನ್ ಅಷ್ಟೇ ಅಲ್ಲದೆ ಅನೇಕ ಜೀವ ಜಂತುಗಳಿಗೆ ಆಶ್ರಯವನ್ನು ನೀಡುತ್ತದೆ. ವಾತಾವರಣದ ಉಷ್ಣತೆ ನಿಯಂತ್ರಿಸಲು, ಮಳೆಯಾಗಲು ಮರ ಬೇಕೆ ಬೇಕು. ಮಣ್ಣಿನ ಸವಕಳಿ ತಪ್ಪಿಸಲು, ಪ್ರವಾಹ ತಡೆಯಲು ಮರಗಳು ಅವಶ್ಯಕ. ಈ ಎಲ್ಲವುಗಳ ಜೊತೆಗೆ ನಮ್ಮ ಜೀವ, ಜೀವನ ನಡೆಯಲು ಮರಗಳೇ ಮೂಲಾಧಾರ.ಹಲವಾರು ವರ್ಷಗಳಿಂದಾಗುತ್ತಿರುವ ಅರಣ್ಯ ನಾಶದಿಂದಾಗಿ ಸಸ್ಯ ಸಂಪನ್ಮೂಲ ನಶಿಸಿ ಹೋಗುತ್ತಿದೆ. ಈಗ ಇದರ ವಿರುದ್ಧ ಪರಿಣಾತ್ಮಕವಾಗಿ ಹೋರಾಡುವ ಸಮಯ ಬಂದಿದೆ.

ಆದ ನಷ್ಟ ತುಂಬಲು ಕಾಲವನ್ನು ಹಿಂದಿರುಗಿಸಲು ಸಾಧ್ಯವಿಲ್ಲ. ಈಗ ನಮ್ಮಿಂದಾಗಬಹುದಾದ ಕೆಲಸವೆಂದರೆ ಆದಷ್ಟು ಹೆಚ್ಚು ಗಿಡಗಳನ್ನು ನೆಡುವುದು, ಕಾಂಕ್ರೀಟ್ ಕಾಡಾಗಿರುವ ನಗರಗಳನ್ನು ಹಸಿರಾಗಿಸುವುದು, ಮತ್ತು ಉದ್ಯಾನವನಗಳನ್ನು ನಿರ್ಮಿಸಿ ಸಮತೋಲನತೆ ಕಾಪಾಡುವುದು. ಈ ಸಲದ ವಿಶ್ವ ಪರಿಸರ ದಿನದ ಘೋಷಣೆ, ” ಪರಿಸರ ವ್ಯವಸ್ಥೆಯ ಮರು ಸೃಷ್ಟಿ.

ಪರಿಸರ ವ್ಯವಸ್ಥೆಯ ಮರು ಸ್ಥಾಪನೆಯು ಅವನತಿಗೊಳಗಾದ ಪರಿಸರ ವ್ಯವಸ್ಥೆಯನ್ನು ಮರು ಸೃಷ್ಟಿಸಲು, ಅದು ಹೇಗಿದೆಯೋ ಹಾಗೆಯೇ ಸಂರಕ್ಷಿಸಲು, ಹಾಗೂ ಮುಂದಾಗಬಹುದಾದ ಅಪಾಯಗಳನ್ನು ತಡೆಯುವಂತೆ ಮಾಡುತ್ತದೆ. ಮಲಿನಗೊಳ್ಳುತ್ತಿರುವ ಪರಿಸರದ ಬದಲಾಗಿ ನಾವು ಶುದ್ಧೀಕರಣಗೊಳ್ಳುತ್ತಿರುವ ಪರಿಸರದೆಡೆಗೆ ಸಾಗಬೇಕಿದೆ. ಆರೋಗ್ಯವಂತ ಪರಿಸರದಿಂದ ಮಾತ್ರ ವಾತಾವರಣದ ತಾಪಮಾನ ಹಾಗು ಜೀವ ವಯ್ವಿದ್ಯತೆಯ ನಾಶವನ್ನು ತಡೆಯಲು ಸಾಧ್ಯ.

ವಯಕ್ತಿತವಾಗಿ ಪರಿಸರ ವ್ಯವಸ್ಥೆಯ ಮರು ಸೃಷ್ಟಿಯ ಈ ಕಾರ್ಯದಲ್ಲಿ ಪಾಲ್ಗೊಳ್ಳಲು ನಮಗೆ ಹಲವು ದಾರಿಗಳಿವೆ. ಹೆಚ್ಚೆಚ್ಚು ಗಿಡಗಳನ್ನು ನೆಡುವುದು, ತ್ಯಾಜ್ಯ ವಿಲೇವಾರಿಯಲ್ಲಿ ಸಹಕರಿಸುವುದು, ಮತ್ತು ಸಾವಯವ ಗೊಬ್ಬರವನ್ನು ಹಿಂದಿನಂತೆ ತಯಾರಿಸುವುದರ ಮೂಲಕ ವಾತಾವರಣದ ಮೇಲಿರುವ ಒತ್ತಡವನ್ನು ಪರಿಸರ ಮಾಲಿನ್ಯವನ್ನು ತಗ್ಗಿಸ ಬಹುದಾಗಿದೆ. ಇದು ಪರಿಸರ ತಾನೇ ಸರಿಯಾಗಲು ಒಂದು ಒಳ್ಳೆಯ ಮಾರ್ಗ.

ಈ ವರ್ಷ  ” ಟಿಪ್ಸ್ ಸೆಷನ್” ಸಂಸ್ಥೆಯು ಉಡುಪಿ, ಮಂಗಳೂರು, ಚಿಕ್ಕಮಗಳೂರಿನಾದ್ಯಂತ 5000 ಕ್ಕೂ ಅಧಿಕ ಗಿಡಗಳನ್ನು ವಿತರಿಸಲು ನಿರ್ಧರಿಸಿದೆ. ಸ್ಥಳೀಯರಿಗೆ ಗಿಡಗಳನ್ನು ನೀಡಿ ಅವರು ಅದನ್ನು ನೆಟ್ಟು ಪೋಷಿಸುವಂತೆ ಪ್ರೋತ್ಸಾಹಿಸಲಾಗುವುದು. ಹಾಗು ಗಿಡದ ಬೆಳವಣಿಗೆಯ ಕುರಿತ ಮಾಹಿತಿ ಕೂಡ ಸಂಗ್ರಹಿಸಲಾಗುವುದು. ಪ್ರತೀ ವರ್ಷ ನೆಟ್ಟ ಗಿಡಗಳ ವರದಿಯನ್ನು ವಿಶ್ವ ಪರಿಸರದ ದಿನ ಪ್ರಕಟಿಸುವ ಯೋಜನೆಯೂ ಇದೆ. ಪರಿಸರ ವ್ಯವಸ್ಥೆಯ ಮರು ಸೃಷ್ಟಿಯ ಈ ಮಹತ್ಕಾರ್ಯಕ್ಕೆ ಸಮುದಾಯದೊಡಗೂಡಿ ಇದು ನಾವು ನೀಡ ಬಯಸುವ ಯೋಗದಾನ. ಈ ಮೂಲಕ ಮಣ್ಣಿನ ಫಲವತ್ತತೆ ಮತ್ತು ಶುದ್ಧ ಗಾಳಿಯಿಂದ ಜೈವಿಕ ವೈವಿಧ್ಯತೆಯನ್ನು ಪುನಃ ಸ್ಥಾಪಿಸಲು ಸಹಕರಿಸುವಂತೆ ಸಮುದಾಯವನ್ನು ಶಕ್ತಗೊಳಿಸುವುದು ನಮ್ಮ ಆಶಯವಾಗಿದೆ. ಪರಿಣಾಮ ಎಷ್ಟೇ ಸಣ್ಣದಾಗಿರಲಿ ನಮ್ಮ ಪ್ರತೀ ಸಣ್ಣ ಹೆಜ್ಜೆಯೂ ಪರಿಸರದ ಅವನತಿ ಹಾಗು ವಾತಾವರಣದ ಅಸಮತೋಲನತೆಯ ವಿರುದ್ಧದ ಹೋರಾಟದತ್ತ ನಮ್ಮನ್ನು ಒಂದು ಹೆಜ್ಜೆ ಮುಂದೆ ಕೊಂಡೊಯ್ಯುತ್ತದೆ.

ಎಲ್ಲರೂ ಒಂದಾಗಿ ನಿಜವಾದ ಪರಿಣಾತ್ಮಕವಾಗಿ ಕಾರ್ಯ ಪೃವೃತ್ತರಾಗಲು ಇದು ಸರಿಯಾದ ಸಮಯ. ಬನ್ನಿ ಪೃಕೃತಿಯ ಜೊತೆಜೊತೆಗೆ ವಿಶ್ವದ   ಶಾಂತಿಯನ್ನು ಮರು ಸೃಷ್ಟಿಸೋಣ…